Powered By Blogger

ಶನಿವಾರ, ನವೆಂಬರ್ 18, 2023

ಕ್ರಿಕೆಟ್ ವಿಶ್ವಕಪ್ ೨೦೨೩


ಶುಭವಾಗಲಿ ನಿಮಗೆ ಶುಭವಾಗಲಿ

ರೋಹಿತ್ ಬಳಗಕ್ಕೆ ಗೆಲುವಾಗಲಿ

ಜಯವಾಗಲಿ , ನಿಮಗೆ ಜಯವಾಗಲಿ

ಕ್ರಿಕೆಟ ವಿಶ್ವಕಪ್  ಇಂದು ನಮದಾಗಲಿ


ರಾಹುಲ್ ದ್ರಾವಿಡರ ತರಬೇತಿಯಲ್ಲಿ

ಭಾರತ ತಂಡ ಬಲವಾಗಲಿ

ರೋಹಿತ್ ಶರ್ಮಾರ ನಾಯಕತ್ವದಲ್ಲಿ

ಮೂರನೇ ಕಪ್ ಮುಡಿಗೆರಲಿ


ರೋಹಿತ್ ಮತ್ತು ಶುಭಮನ್ ಗಿಲ್

ಗಟ್ಟಿಯಾಗಿ ನಿಲ್ಲಲಿ,

ವಿರಾಟ್  ಮತ್ತು ಅಯ್ಯರ 

ರನ್ ಹೊಳೆಯ ಹರಿಸಲಿ


ವಿಕೇಟ ಕೀಪರ್ ಕೆ ಎಲ್ ರಾಹುಲ್

ಕನ್ನಡಿಗರ ಮನ ಗೆಲ್ಲಲಿ

ಸೂರ್ಯಕುಮಾರನ ಆಟದ ಶೈಲಿ

ನೋಡುಗರ ಕಣ್ಮನ ಸೆಳೆಯಲಿ


ಜಡೇಜಾರ ಆಲ್ರೌಂಡರ ಆಟ

ಭಾರತ ತಂಡಕ್ಕೆ ವರವಾಗಲಿ

ಕುಲದೀಪರ ಮಾರಕ ದಾಳಿ

ಎದುರಾಳಿ ತತ್ತರಿಸಲಿ


ಶಮಿ ಸಿರಾಜ್ ಬುಮ್ರಾ ಎಸೆತದಲಿ

ಬಿಡದೇ ವಿಕೇಟ ಉರುಳಲಿ

ಕಾಂಗರೋವನ್ನು ಸದೆಬಡೆದು ಭಾರತ

ಹುಲಿಯಂತೆ ಘರ್ಜಿಸಲಿ


ಮಂಜುನಾಥ ಸಿಂಗನ್ನವರ

(ಪ್ರ.ದ.ಸ) ಸಮುದಾಯ ಆರೋಗ್ಯ ಕೇಂದ್ರ ಯರಗಟ್ಟಿ

ಭಾನುವಾರ, ಜುಲೈ 18, 2021

ಕಣ್ಣೀರ ಮಳೆ


*ಕವನದ ಶಿರ್ಷಿಕೆ:   ಕಣ್ಣೀರ ಮಳೆ*


ಬಾನಿನಲಿ ನೀರಹನಿಗಳು ಸುರಿದ ಹಾಗೆ

ಬದುಕಿನಲಿ ಕಣ್ಣೀರ ಹನಿಗಳು ಸುರಿದಿವೆ

ತೋಯಿಸಿಕೊಂಡ ಮಳೆಹನಿಗಳ ಜೊತೆಗೆ

ಕಾಣದ ಕಣ್ಣೀರ ಹನಿಗಳು ಕಾಣೆಯಾಗಿವೆ


ಎದೆಯ ನೋವಿಗೂ ಕಣ್ಣಿನ ನೀರಿಗೂ

ಎಲ್ಲಿಂದ ಎಲ್ಲಿಗೆ ಸಂಬಂಧ, 

ಎದೆಯ ಗಾಯಕೆ ತಾನೂ ಅಳುವುದು

ಇದೆಂಥ ಅದ್ಭುತ ಅನುಬಂಧ.


ದೇಹದ ಗಾಯಕೆ ರಕ್ತವು ಸುರಿದರೆ

ಮನದ ಗಾಯಕೆ ಕಣ್ಣೀರು ಸುರಿವುದು

ಮನದ ಭಾವಗಳು ಉಕ್ಕಿ ಹರಿದರೆ

ಕಣ್ಣೀರ ಜಲಪಾತ ಭೋರ್ಗರೆಯುವುದು


ಪ್ರೀತಿ ಕರುಣೆ ಕಾಳಜಿಯೋಂದೆ

ಎದೆಯ ನೋವಿಗೆ ಮುಲಾಮು

ಕಣ್ಣೀರ ಒರೆಸುವ ಕೈಗಳಿಗಿಂದು

ಸಲ್ಲಲೇಬೇಕು ಪ್ರಣಾಮು


ಕಣ್ಣೀರಿನ ಬದುಕನು ಜರಿಯದಿರು

ಕಷ್ಟಗಳುಂಡವರೇ ಇಂದಿನ ಸುಖಿಗಳು

ಮನದ ನೋವಿಗೆ ಹೆದರದಿರು

ಧೈರ್ಯವೇ ಬದುಕಿಗೆ ಹೆದ್ದಾರಿಗಳು


*🖋ಮಂಜುನಾಥ ಸಿಂಗನ್ನವರ*

ಮು/ಪೋ:ತೆಗ್ಗಿಹಾಳ ತಾ:ಸವದತ್ತಿ

ಜಿ:ಬೆಳಗಾವಿ ಪಿನ್:೫೯೧೧೧೭

ಮೊಬೈಲ:೭೩೫೩೫೩೬೪೧೦



ಶುಕ್ರವಾರ, ಜೂನ್ 18, 2021

ಅನಿಸುತಿದೆ ಯಾಕೋ ಇಂದು

 


ಹಲ್ಲುಜ್ಜಲು ಇದ್ದಿಲಾದರೇನು,ಉಪ್ಪಾದರೇನು

ಹಲ್ಲು ಹಸನಾದರೇ ಸಾಕು ಅನಿಸುತ್ತಿತ್ತು.

ಇಂದು ಬಾಯಿಯ ಆ ಗೇಟಿಗೆ

ಕೊಲ್ಗೇಟೆ ಬೇಕು ಅನಿಸುತ್ತದೆ


ಧರಿಸಲು ಮುದುಡಿದರೇನು, ಹಳೆಯದಾದರೇನು

ಮೈ ಮುಚ್ಚಲು ಬಟ್ಟೆಯೊಂದು ಸಾಕು ಅನಿಸುತ್ತಿತ್ತು.

ಇಂದು ಇಸ್ತ್ರೀಯಲ್ಲಿ ಸಾಪು ಮಾಡಿದ

ತೀಜೋರಿಯಲ್ಲಿಟ್ಟ  ಬಟ್ಟೆಯೇ ಬೇಕು ಅನಿಸುತ್ತದೆ


ಉಣಲು ಬಿಸಿಯಾದರೇನು,ಹಸಿಯಾದರೇನು

ಹಸಿವು ನೀಗೀದರೇ ಸಾಕು ಅನಿಸುತ್ತಿತ್ತು.

ಇಂದು ನಾಲಿಗೆಯ ಚಪಲಕ್ಕೆ

ಬಯಸಿದ ಅಡುಗೆಯೇ ಬೇಕು ಅನಿಸುತ್ತಿದೆ


ಸಂಚರಿಸಲು ಸಣ್ಣದಾಗಿದ್ದರೇನು,ದೊಡ್ಡದಾದರೇನು

ಗೌರ್ಮೆಂಟಿನ ಸೈಕಲ್ ಸಿಕ್ಕರೆ ಚಾನ್ಸ ಅನಿಸುತ್ತಿತ್ತು

ಇಂದು ವೇತನ ಬರುತ್ತಿದ್ದರೂ

ಗೌರ್ಮೆಂಟಿನ ಬೋನಸ್ ಬೇಕು ಅನಿಸುತ್ತದೆ.


ವಾಸಿಸಲು ಮನೆ ಸಣ್ಣದಿದ್ದರೇನು,ಬಣ್ಣವಿರದಿದ್ದರೇನು

ಸುಣ್ಣದ ಸಣ್ಣ ಮನೆಯೆ ಸುಃಖ ಎನಿಸುತ್ತಿತ್ತು

ಇಂದು ಬಣ್ಣ-ಬಣ್ಣದ ಬಂಗಲೆಯೇ

ಮನ ಬಯಸಿ ಬೇಕು ಅನಿಸುತ್ತದೆ.


🖊ಮಂಜುನಾಥ ಸಿಂಗನ್ನವರ.

🏘ತೆಗ್ಗಿಹಾಳ








ಮಂಗಳವಾರ, ಜೂನ್ 15, 2021

ಓ ಸಂಚಾರಿ, ನಿಧಾನ


ಸಾಗರದಂತೆ ಹರಿದಾಡುತ್ತವೆ
ರಸ್ತೆಯಲ್ಲಿ ವಾಹನಗಳು
ಮನಬಂದತೆ ಓಡಾಡುತ್ತವೆ
ರಸ್ತೆಯಲ್ಲಿ ಜನಗಳು

ಸಾವಿರಾರು ಹೆಣಗಳುರುಳಿವೆ
ರಸ್ತೆಯಲ್ಲಿ, ಬರೀ ರಕ್ತದೋಕುಳಿ
ಹಲವರ ಅಂಗಗಳು ಕಳೆದಿವೆ
ರಸ್ತೆಯಲ್ಲಿ, ಬರೀ ರಕ್ತದ ಅಂಬಲಿ

ಮೊಜು ಮಾಡಲು ಹೊದವನು
ಒಡೆದ ಗಾಜಿನಂತೆ ಚೂರಾಗಿದ್ದಾನೆ
ಚೇಜು ಮಾಡಲು ಹೋದವನು
ಒಡೆದ ಬಲೂನಿನಂತೆ ಉಸಿರು ಬಿಟ್ಟಿದ್ದಾನೆ

ಕುದುರೆಯ ಸಾರಥಿಯಾದವನು
ಪಳಗಿಸಲು ಬಲ್ಲವನಾಗಿರಬೇಕು
ವಾಹನದ ಸವಾರಿಮಾಡುವನು
ಕವಚ ಕುಂಡಲಗಳ ಧರಿಸಿರಬೇಕು

ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ
ಒಬ್ಬ ಒಳ್ಳೆಯ ಸಂಚಾರಿ ಎನಿಸಿ
ಅಪಘಾತ ಆದವರನು ಉಪಚರಿಸಿ
ನಿಧಾನವೇ ಪ್ರಧಾನವೆಂದು ಆಚರಿಸಿ

🖋ಮಂಜುನಾಥ ಸಿಂಗನ್ನವರ
ಸಾ// ತೆಗ್ಗಿಹಾಳ

ಭಾನುವಾರ, ಜೂನ್ 13, 2021

ಅವ್ವ


ಅವ್ವ ಎಂದರೆ ಆಗುವುದು ಸಂತೋಷ

ಮರಳಿ ಮಗುವಾಗಬೇಕೆಂಬ ಹತಾಶ

ಅವ್ವನ ಮಡಲಿನ ಆ ಸಂತೋಷ

ನೆನೆದಾಗಲೆಲ್ಲ ಅಪ್ಪುಗೆಯ ಹರುಷ


ತನ್ನ ದು:ಖವ ಮರೆತು ನನ್ನ ಸಲುಹಿದಳು

ನಮ್ಮ ಒಳಿತಿಗಾಗಿ ತಾನು ದುಡಿದಳು

ಅಳುವ ಕಂದನಿಗೆ ಜೋಗುಳ ಹಾಡಿದಳು

ದು:ಖದಲಿ ತಾನಿದ್ದು ಅಕ್ಕರೆಯಲಿ ಬೆಳೆಸಿದಳು


ಅವ್ವ ಎಂದರೆ ಹುಟ್ಟುವುದು ಪ್ರೀತಿ

ಎಲ್ಲರ ಪ್ರೀತಿಯನು ಮೀರಿಸುವ ರೀತಿ

ತಾಯಿ ಮಗನ ವಾತ್ಸಲ್ಲ್ಯ ರೀತಿ

ಎಂದೂ ಬೇರ್ಪಡಿಸಲಾಗದ ಸ್ಥಿತಿ


ಅವ್ವ ಎಂದರೆ ಮೊದಲ ಗುರು

ಅವಳಿಲ್ಲದೇ ಜೀವನ ಬೇಜಾರು

ತಾಯಿಯ ಗುಣಗಳು ನೂರುನೂರು

ಅವಳೇ ನಿಜವಾದ ದೇವರು


ನನ ಜೀವನ ಮೀಸಲು ತಾಯಿಗೆ 

ಅವಳ ರಕ್ಷಿಸುವೆ ಕೊನೆವರೆಗೆ

ಹೋರಾಡುವೆನು ಜಯಸುವರೆಗೆ

ವಂದಿಸುವೆನು ತಾಯಿ ಪ್ರೀತಿಗೆ.


✒️ಮಂಜುನಾಥ ಸಿಂಗನ್ನವರ

ಸಾ//ತೆಗ್ಗಿಹಾಳ

ಮೊಬೈಲ್:೭೩೫೩೫೩೬೪೧೦

ಭಾನುವಾರ, ಜೂನ್ 6, 2021

ಪರಿಸರ ಹೊಳೆಯಲಿ ಫಳಫಳ

 ಬಯಸಿದ್ದೆಲ್ಲವೂ ಬೇಕೆ ಮರುಳೆ

ಮಾವು,ಬೇವು,ಪೇರಲ,ನೇರಳೆ 

ಜೋತೆಗೆ ತಿಂದೆ ಮಾಂಸ ಮೂಳೆ

ಏನುಳಿಸಿದೆ? ಮಕ್ಕಳಿಗಿರಲಿ ನಾಳೆ


ಮರ ಕಡಿದು ಮನೆ ಹಾಕಿದೆ

ಕಾರ್ಖಾನೆಗಳಿಟ್ಟು ಹೊಗೆ ಸೂಸಿದೆ

ತ್ಯಾಜ್ಯಗಳ  ಬಿಟ್ಟು ಜಲಚರಗಳ ಕೊಂದೆ

ಏನುಳಿಸಿದೆ? ಬೆಳೆಸುವುದು ಬಿಟ್ಟು ಬೋಳಿಸಿದೆ


ಸ್ವಾರ್ಥಕ್ಕಾಗಿ ಪರಿಸರದ ಹಿತ ಮರೆಯಾಯ್ತು

ಕಣ್ಮುಂದೆ  ಇದ್ದ ಕಾನನ ಕಳೆದು ಹೊಯಿತು

ಶಿಕಾರಿಯ ಮೊಜಿನಲಿ ಪ್ರಾಣಿಗಳ ಬಲಿಯಾಯಿತು

ಏನುಳಿಸಿದೆ? ನಿನ್ನ ಪೀಳಿಗೆಗೆ ಇಲ್ಲದಾಯಿತು


ಪ್ರಾಣಿ-ಪಕ್ಷಿಗಳು ನೋಡಲು ಅಪರೂಪವಾಯ್ತು

ವನ-ಬನಗಳ ಹುಡುಕಾಡಿ ನೋಡುವುದಾಯ್ತು

ಪ್ಲಾಸ್ಟಿಕ ಬಳಸಿ ಭೂತಾಯಿಯ ಕಳೆ ಇಲ್ಲದಾಯ್ತು

ಏನುಳಿಸಿದೆ? ಕಾಗದಗಳ ಮರುಬಳಸು ಕಾಡು ಉಳಿದೀತು.









🖋ಮಂಜುನಾಥ ಸಿಂಗನ್ನವರ

ಸಾ// ತೆಗ್ಗಿಹಾಳ ತಾ// ಸವದತ್ತಿ

ಜಿ// ಬೆಳಗಾವಿ ಪಿನ್//೫೯೧೧೧೭

ಪೋನ್::೭೩೫೩೫೩೬೪೧೦

ಶುಕ್ರವಾರ, ಜೂನ್ 4, 2021

ಬಾಂಧವನಾಗಿ ಬದುಕು

 ಅಷ್ಟು,ಇಷ್ಟು,ಎಷ್ಟೇಷ್ಟೋ ಪ್ರೀತಿ

ಅವರಿಗೆ,ಇವರಿಗೆ, ಯಾರ್ಯಾರಿಗೋ ಹೊಯ್ದೆ

ಎಳ್ಳಷ್ಟಾದರೂ ಇರಲಿ ಹೆತ್ತವರಿಗೆ.


ಕನಿಷ್ಟ,ಗರಿಷ್ಟ,ನಿಕೃಷ್ಟ ಬೇದ

ಉಳ್ಳವರು, ಇಲ್ಲದವರಿಗೆ, ಯಾರ್ಯಾರಿಗೋ ಮಾಡಿದೆ

ಕೊಂಚ ಮನಸ್ಸಾದರೂ ಮರಗಲಿ ಮಾನವಿಯತೆಗೆ


ನಾನು, ನನ್ನದು,ನಿನ್ನದೆಂಬ ಸ್ವಾರ್ಥ

ಅಲ್ಲಿ,ಇಲ್ಲಿ,ಎಲ್ಲೆಂದರಲ್ಲಿ ತೋರಿದೆ

ಎಲ್ಲ ಕೊಟ್ಟ ಪೃಕೃತಿಯನ್ನಾದರೂ ನೆನಸು ಹೆಸರಿಗೆ


ಹೆಣ್ಣು,ಹೊಣ್ಣು,ಮಣ್ಣೆಂಬ ಭ್ರಮೆಯ

ಕನಸು,ನನಸು,ಮನಸಿನಲಿ ತುಂಬಿರುವೆ

ಅಸೇಗಾಳಾದರೂ ಏತಕೋ ಅಳುತ ಸಾಯುವ ಜೀವಕೆ


ಅವನು,ಇವನು,ಯಾವನೋ ಅನ್ನದೇ

ನಾವು ,ನಮ್ಮವರು,ನಮ್ಮದು ಎಂದರಿತುಕೋ

ಜನ್ಮ ಸಾರ್ಥಕವಾದರೂ ಆಗಲಿ ನಿನ ಬದುಕಿಗೆ


🖋ಮಂಜುನಾಥ  ಸಿಂಗನ್ನವರ

ಸಾ//ತೆಗ್ಗಿಹಾಳ ತಾ//ಸವದತ್ತಿ

ಜಿ//ಬೆಳಗಾವಿ ಪಿನ್೫೯೧೧೧೭



ಕ್ರಿಕೆಟ್ ವಿಶ್ವಕಪ್ ೨೦೨೩

ಶುಭವಾಗಲಿ ನಿಮಗೆ ಶುಭವಾಗಲಿ ರೋಹಿತ್ ಬಳಗಕ್ಕೆ ಗೆಲುವಾಗಲಿ ಜಯವಾಗಲಿ , ನಿಮಗೆ ಜಯವಾಗಲಿ ಕ್ರಿಕೆಟ ವಿಶ್ವಕಪ್  ಇಂದು ನಮದಾಗಲಿ ರಾಹುಲ್ ದ್ರಾವಿಡರ ತರಬೇತಿಯಲ್ಲಿ ಭಾರತ ತಂಡ...