Powered By Blogger

ಭಾನುವಾರ, ಜುಲೈ 18, 2021

ಕಣ್ಣೀರ ಮಳೆ


*ಕವನದ ಶಿರ್ಷಿಕೆ:   ಕಣ್ಣೀರ ಮಳೆ*


ಬಾನಿನಲಿ ನೀರಹನಿಗಳು ಸುರಿದ ಹಾಗೆ

ಬದುಕಿನಲಿ ಕಣ್ಣೀರ ಹನಿಗಳು ಸುರಿದಿವೆ

ತೋಯಿಸಿಕೊಂಡ ಮಳೆಹನಿಗಳ ಜೊತೆಗೆ

ಕಾಣದ ಕಣ್ಣೀರ ಹನಿಗಳು ಕಾಣೆಯಾಗಿವೆ


ಎದೆಯ ನೋವಿಗೂ ಕಣ್ಣಿನ ನೀರಿಗೂ

ಎಲ್ಲಿಂದ ಎಲ್ಲಿಗೆ ಸಂಬಂಧ, 

ಎದೆಯ ಗಾಯಕೆ ತಾನೂ ಅಳುವುದು

ಇದೆಂಥ ಅದ್ಭುತ ಅನುಬಂಧ.


ದೇಹದ ಗಾಯಕೆ ರಕ್ತವು ಸುರಿದರೆ

ಮನದ ಗಾಯಕೆ ಕಣ್ಣೀರು ಸುರಿವುದು

ಮನದ ಭಾವಗಳು ಉಕ್ಕಿ ಹರಿದರೆ

ಕಣ್ಣೀರ ಜಲಪಾತ ಭೋರ್ಗರೆಯುವುದು


ಪ್ರೀತಿ ಕರುಣೆ ಕಾಳಜಿಯೋಂದೆ

ಎದೆಯ ನೋವಿಗೆ ಮುಲಾಮು

ಕಣ್ಣೀರ ಒರೆಸುವ ಕೈಗಳಿಗಿಂದು

ಸಲ್ಲಲೇಬೇಕು ಪ್ರಣಾಮು


ಕಣ್ಣೀರಿನ ಬದುಕನು ಜರಿಯದಿರು

ಕಷ್ಟಗಳುಂಡವರೇ ಇಂದಿನ ಸುಖಿಗಳು

ಮನದ ನೋವಿಗೆ ಹೆದರದಿರು

ಧೈರ್ಯವೇ ಬದುಕಿಗೆ ಹೆದ್ದಾರಿಗಳು


*🖋ಮಂಜುನಾಥ ಸಿಂಗನ್ನವರ*

ಮು/ಪೋ:ತೆಗ್ಗಿಹಾಳ ತಾ:ಸವದತ್ತಿ

ಜಿ:ಬೆಳಗಾವಿ ಪಿನ್:೫೯೧೧೧೭

ಮೊಬೈಲ:೭೩೫೩೫೩೬೪೧೦



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪುರುಸೊತ್ತ ಮಾಡ್ಕೋ

ಜೀವನಾ ಅನ್ನುದ ಒಂದ ಐತಿ ಜೀವ ಅನ್ನೂದು ಒಂದ ಐತಿ ದುಡಿಯುದ ಅಂತೂ ಇದ್ದದೈತಿ ಪುರಸೊತ್ತ ಮಾಡ್ಕೋ ಜೀವನಕ್ಕ ಸ್ವಲ್ಪ ಪುರಸೊತ್ತ ಮಾಡ್ಕೋ ದುಡಿದಿದ್ದ ಎಲ್ಲ ಹೊಟ್ಟಿ ಸಮಂದ ಉಳಿ...