ಜೀವನಾ ಅನ್ನುದ ಒಂದ ಐತಿ
ಜೀವ ಅನ್ನೂದು ಒಂದ ಐತಿ
ದುಡಿಯುದ ಅಂತೂ ಇದ್ದದೈತಿ
ಪುರಸೊತ್ತ ಮಾಡ್ಕೋ
ಜೀವನಕ್ಕ ಸ್ವಲ್ಪ ಪುರಸೊತ್ತ ಮಾಡ್ಕೋ
ದುಡಿದಿದ್ದ ಎಲ್ಲ ಹೊಟ್ಟಿ ಸಮಂದ
ಉಳಿದಿದ್ದ ಎಲ್ಲ ಬಟ್ಟಿ ಸಮಂದ
ದುಡಿಬ್ಯಾಡ ಬಡಬಡಕೊಂದ
ಪುರಸೊತ್ತ ಮಾಡ್ಕೋ
ಅದರಾಗ ಸ್ವಲ್ಪ ಪುರಸೊತ್ತ ಮಾಡ್ಕೋ
ಜನ್ಮ ಅಂತು ಉಚಿತ ಐತಿ
ಸಾಯುದಂತು ಖಚಿತ ಐತಿ
ಕಷ್ಟ ಸುಖ ಎರಡೂ ಐತಿ
ಪುರಸೊತ್ತ ಮಾಡ್ಕೋ
ಖುಷಿ ಇರಾಕ ಸ್ವಲ್ಪ ಪುರಸೊತ್ತ ಮಾಡ್ಕೋ
ಬೇಡಿ ಬಂದವ್ರಿಗೆ ನೀಡಿ ಕಳಸ
ಕಾಡಿ ಬಂದವ್ರಿಗೆ ನೋಡಿ ಕಳಸ
ಯಾರ ಹಂಗನ್ಯಾಗು ಇಲ್ಲಂತೇಳಿ
ಹಂಗ ಕಳಸಬ್ಯಾಡ
ಪುರಸೊತ್ತ ಮಾಡ್ಕೋ
ದಾನ ಧರ್ಮಕ್ಕ ಸ್ವಲ್ಪ ಪುರಸೊತ್ತ ಮಾಡ್ಕೋ
ಪ್ರೀತಿ ಭಿತ್ತಿ ಜೀವನ ಮಾಡ್ಕೊ
ನೀತಿ ಭಿತ್ತಿ ನ್ಯಾಯ ಮಾಡ್ಕೋ
ಅರಾಮದನ ಅಂತೇಳಿ
ಅಹಂ ಮಾಡಬ್ಯಾಡ.
ಸತ್ತ ಮ್ಯಾಲು ಜನ ನೆನಸುವಂಗ
ಹೆಣ ಚಂದ ಮಾಡ್ಕೋ
🖋ಮಂಜುನಾಥ ಸಿಂಗನ್ನವರ



