Powered By Blogger

ಶನಿವಾರ, ಮೇ 1, 2021

ಹರಡಬೇಡಿ ಸೋಂಕು


ಹರಡಬೇಡಿ ಜನರೇ ಕೋರಾನಾ ಸೋಂಕು
ಸಾವು-ಬದುಕಿನಾಟಕ್ಕೆ ಕಡಿವಾಣ ಹಾಕು
ಜಗ ಬದುಕಿಸುವುದಿದ್ದರೆ ಆರಡಿ ಅಂತರ ಬೇಕು
ಆಗಾಗ ಕೈ ತೊಳೆದು , ಮುಖಕ್ಕೆ ಮಾಸ್ಕನು ಹಾಕು

ಕೊಲ್ಲಬೇಡಿ ಜನರೇ ಭಯ ಉಂಟು ಮಾಡಿ
ರೋಗಿಯ ಸಂತೈಸಿ ಸೂಕ್ತ ಮಾರ್ಗದರ್ಶನ ನೀಡಿ
ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬೇಟಿಕೊಡಿ
ಅರ್ಹ ಫಲಾನುಭವಿಯಾದರೆ ಕೊವಿಡ್ ಲಸಿಕೆ ಪಡಿ

ಮಸನಮಾಡಬೇಡಿ ಜನರೇ  ಈ ಸ್ವರ್ಗವನು
ತಪ್ಪದೇ ಪಾಲಿಸಿ ವೈಧ್ಯರ ಸೂಚನೆಯನು
ನಿಮ್ಮಂತೆ ಕಾಣಿ ಕರ್ತವ್ಯದ ಸಿಬ್ಬಂದಿಯನು
ಏಕೆಂದರೆ ತನ್ನುಸಿರು ಲೆಕ್ಕಿಸದೆ ದುಡಿಯುತಿಹನು

ಪಾಲನೆಮಾಡಿ ಜನರೇ ಔಷಧಿಯಿದ್ದಂಗೆ ಸೂಚನೆಗಳು
ತಪ್ಪದೇ ಎಚ್ಚರದಿಂದ ಅನ್ವಯವಾಗಲಿ ಕ್ರಮಗಳು
ಕೈ ಕೈ ಸೇರಿದರೆ ಚಪ್ಪಾಳೆಗಳು
ಹಾರಲಿ ವಾರಿಯರ್ ಗಳಿಗೆ ಹೂಗಳು



..🖋🖋ಮಂಜುನಾಥ ಸಿಂಗನ್ನವರ

8 ಕಾಮೆಂಟ್‌ಗಳು:

ಪುರುಸೊತ್ತ ಮಾಡ್ಕೋ

ಜೀವನಾ ಅನ್ನುದ ಒಂದ ಐತಿ ಜೀವ ಅನ್ನೂದು ಒಂದ ಐತಿ ದುಡಿಯುದ ಅಂತೂ ಇದ್ದದೈತಿ ಪುರಸೊತ್ತ ಮಾಡ್ಕೋ ಜೀವನಕ್ಕ ಸ್ವಲ್ಪ ಪುರಸೊತ್ತ ಮಾಡ್ಕೋ ದುಡಿದಿದ್ದ ಎಲ್ಲ ಹೊಟ್ಟಿ ಸಮಂದ ಉಳಿ...