Powered By Blogger

ಭಾನುವಾರ, ಮೇ 16, 2021

*ಸವಾಲುಗಳು ಬೇಕು ಬದುಕಿಗೆ*


ಸವಾಲುಗಳು ಬೇಕು ಬದುಕಿಗೆ

ಎದೆಯಲ್ಲಿ ಕಿಚ್ಚು ಹಚ್ಚಲು

ಮನದಲ್ಲಿ ಹುಚ್ಚು ಬೆಳೆಯಲು

ಸವಾಲುಗಳು ಬೇಕು ಸಾಧನೆಗೆ


ಬದುಕನು ಸುಮ್ಮನೇ ಸವೆಸಬೇಡಿ

ಗುರಿಯ ಕಡೆ ಗರಿಷ್ಟ ಗಮನಕೊಡಿ

 ಬರುವ ಸಮಸ್ಯೆಗಳಿಗೆ ಮೈಯೊಡ್ಡಿ

ಎಲ್ಲ ಸವಾಲುಗಳ ಗೆಲ್ಲು ಎದೆಯೋಡ್ಡಿ


ಸವಾಲುಗಳಿಲ್ಲದ ಜೀವನ ಸಾಗದೂ ದೂರ

ಸಾಗಬೇಕು ಬರುವ ಅಡೆ-ತಡೆಗಳೊಡೆದು ತೀರ

ಸವಾಲೇದುರಿಸಿದ ಜೀವಕೆ ಬೆಲೆಯಿದೆ ಅಪಾರ

ಸವಾಲುಗಳ ಗೆದ್ದಾಗ ನೀ ಜಗದಲಿ ಅಮರ


ಸಾಧಿಸಿದವರೆಲ್ಲ ಸವಾಲುಗಳನ್ನು ದಾಟಿದವರು

ಗೆದ್ದರೆ ಸಾಧಕರು,ಸೋತರೆ ಮಾರ್ಗದರ್ಶಕರು

ಮುಂದಿಟ್ಟ ಹೆಜ್ಜೆಯ ಎಂದಿಗೂ ಹಿಂದಿಡದಿರು

ಸವಾಲುಗಳ ಗೆದ್ದು ಬದುಕಿಗೊಂದು ಅರ್ಥತೋರು


🖋ಮಂಜುನಾಥ ಸಿಂಗನ್ನವರ

ಸಾ//ತೆಗ್ಗಿಹಾಳ  ತಾ//ಸವದತ್ತಿ

ಜಿ//ಬೆಳಗಾವಿ  ಪಿನ್//591117

ಪೋನ್:7353536410



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪುರುಸೊತ್ತ ಮಾಡ್ಕೋ

ಜೀವನಾ ಅನ್ನುದ ಒಂದ ಐತಿ ಜೀವ ಅನ್ನೂದು ಒಂದ ಐತಿ ದುಡಿಯುದ ಅಂತೂ ಇದ್ದದೈತಿ ಪುರಸೊತ್ತ ಮಾಡ್ಕೋ ಜೀವನಕ್ಕ ಸ್ವಲ್ಪ ಪುರಸೊತ್ತ ಮಾಡ್ಕೋ ದುಡಿದಿದ್ದ ಎಲ್ಲ ಹೊಟ್ಟಿ ಸಮಂದ ಉಳಿ...